© ಕಹಳೆ

EVENTS

I'm a paragraph. Click here to add your own text and edit me. It’s easy. Just click “Edit Text” or double click me to add your own content and make changes to the font. Feel free to drag and drop me anywhere you like on your page. I’m a great place for you to tell a story and let your users know a little more about you.​

ಜಗುಲಿಸಾಲು 

ಕವನ

ವಾಚನ ಕಾರ್ಯಕ್ರಮ 

ಬರೆದಂಥ ಕವಿತೆಗಳನ್ನ ಓದುವ ಖುಷಿಯೇ ಬೇರೆ.. ಅದನ್ನ ಕೇಳೋದಕ್ಕೆ ಅಂತ ಒಂದಷ್ಟ್ ಕಿವಿಗಳಿದ್ರೆ ಅದ್ರ್ ಖುಷಿ ಇನ್ನೂ ಚೆಂದ.!

ಅದಕ್ಕೆಂದೇ ಕಹಳೆ ರೂಪಿಸಿದ ವೇದಿಕೆ ಕವನ ವಾಚನ ಕಾರ್ಯಕ್ರಮ.

ಇಲ್ಲಿಯತನಕ ೨೨ ಕ್ಕೂ ಹೆಚ್ಚು ಕವನ ವಾಚನ ಕಾರ್ಯಕ್ರಮಗಳು ನಡೆದಿವೆ. ಸುಮಾರು ೧೨೦೦ ಕ್ಕೂ ಜನರು ತಮ್ಮ ತಮ್ಮ ಕವಿತೆಗಳನ್ನ ಹಂಚ್ಕೊಂಡಿದ್ದಾರೆ. ಮುಂಬರುವ ಕಾರ್ಯಕ್ರಮಗಳಿಗೆ ಭಾಗವಹಿಸಲು ಕೆಳಗಿನ ಕೊಂಡಿ ಕ್ಲಿಕ್ ಮಾಡಿ
 

ಕಹಳೆ ಕಟ್ಟೆ

ಹಿರಿಯ ಸಾಹಿತಿಗಳೊಂದಿಗೆ ಸಂವಾದ 

ಸಾಹಿತ್ಯದ ಸೂಕ್ಷ್ಮಗಳನ್ನ ಅರಿಯುವ ಸಲುವಾಗಿ ಹಮ್ಮಿಕೊಂಡ ಕಾರ್ಯಕ್ರಮವೇ `ಕಹಳೆ ಕಟ್ಟೆ'.

ಮೊದಲ ಸಂಚಿಕೆಯಲ್ಲಿ ,ಕತೆಗಾರ  ಪ್ರಕಾಶಕ ಶ್ರೀ ವಸುಧೇಂದ್ರ ಸರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು , ಕತೆಗಾರನಿಗೆ ಮತ್ತು ಕತೆಗೆ ಇರಬೇಕಾದ ಪ್ರಜ್ಞೆಗಳ ಬಗ್ಗೆ ತಿಳಿಸಿಕೊಟ್ಟಿದ್ದರು.

ಎರಡನೇ ಸಂಚಿಕೆಯಲ್ಲಿ ಖ್ಯಾತ ಬರಹಗಾರ,ಪತ್ರಕರ್ತ ಜೋಗಿ ಅವರು ಉಪಸ್ಥಿತರಿದ್ದರು.
ಸಾಹಿತ್ಯದ ಹಲವಾರು ಸೂಕ್ಷ್ಮಗಳನ್ನು ವಿವರಿಸಿದರು 

ಮೂರನೇ ಸಂಚಿಕೆಯಲ್ಲಿ ಖ್ಯಾತ ಕವಯತ್ರಿ ಎಂ ಆರ್ ಕಮಲಾ ಅವರು ಭಾಗವಹಿಸಿದ್ದರು. ಕವಿತೆ ಬರೆಯುವ ಕುರಿತು , ಕವಿಗೆ ಇರಬೇಕಾದ ಸಂವೇದನಗಳ ಬಗ್ಗೆ ಅತ್ಯಂತ ಸರಳವಾಗಿ ವಿಭಿನ್ನವಾಗಿ ವಿವರಿಸಿದರು 

ಮತ್ತಷ್ಟು ಸಂಚಿಕೆಗಳು ಬರಲಿವೆ. ಮುಂಬರುವ ಕಾರ್ಯಕ್ರಮಗಳಿಗೆ ಭಾಗವಹಿಸಲು ಕೆಳಗಿನ ಕೊಂಡಿ ಕ್ಲಿಕ್ ಮಾಡಿ

ಪದ ಪಲ್ಲಕ್ಕಿ

ಕೊಟ್ಟಿರುವ

ಪದ

ಬಳಸಿಕೊಂಡು ಕವಿತೆ

ಕಟ್ಟಬೇಕು 

ಪ್ರತೀ ತಿಂಗಳು ಒಂದು ಪದವನ್ನೋ ಅಥವಾ ವಿಷಯವನ್ನೋ ಕೊಡಲಾಗುತ್ತದೆ.. ಅದನ್ನ ಬಳಸಿಕೊಂಡು ಕವಿತೆ ಕಟ್ಟಬೇಕು ( ಕವಿತೆಗೆ ಮಾತ್ರ ಸೀಮಿತಗೊಳಿಸಲಾಗಿದೆ ) ಆ ಪದವನ್ನ ಬಳಸಬಹುದು ಅಥವಾ ಬಳಸದೇ ಕೇವಲ ಸಂಕೇತವಾಗಿಯೂ ಅದು ಅಡಗಿರಬಹುದು.

ಹೀಗೇ ಬರೆದಂಥ ಕವಿತೆಯನ್ನ ನೀವೇ ವಾಚಿಸಿ, ಆ ವಿಡಿಯೋವನ್ನ ನಮಗೆ ಕಳುಹಿಸಿದರೆ ಅದರಲ್ಲಿ ಅತ್ಯುತ್ತಮವಾದುದನ್ನ ಒಂದಷ್ಟು ಅಂಶಗಳನ್ನಿಟ್ಟಕೊಂಡು ನಿರ್ಧರಿಸಿ ನಾವು ನಮ್ಮ ಪುಟದಲ್ಲಿ ಪ್ರಕಟಿಸುತ್ತೇವೆ

 

ಇನ್ನು ಬರಹ ರೂಪದಲ್ಲಿ ಕಳುಹಿಸಬಯಸುವವರು , ಮೈಕ್ರೋಸಾಫ್ಟ್ ವರ್ಡ್ ಡಾಕ್ಯುಮೆಂಟ್ ಅಥವಾ ಪಿಡಿಎಫ್ ರೂಪದಲ್ಲಿ  ನಮಗೆ ಕಳುಹಿಸಬಹುದು

ತಲೆಮಾರು

ಹಳೆತಲೆಮಾರಿನ ಕವಿತೆಗಳನ್ನು

ಹೊಸ ತಲೆಮಾರಿಗೆ ತಲುಪಿಸುವ

ಪುಟ್ಟ ಪ್ರಯತ್ನ

ಹಳೆತಲೆಮಾರಿನ ಕವಿತೆಗಳನ್ನು ಹೊಸ ತಲೆಮಾರಿಗೆ ತಲುಪಿಸುವ ಪುಟ್ಟ ಪ್ರಯತ್ನವೇ ತಲೆಮಾರು

ಇಲ್ಲಿ ಯುವಕವಿಗಳು ಹಳೇ ತಲೆಮಾರಿನ ಕವಿಗಳ ಕವಿತೆಗಳನ್ನು ಓದಿ ಅವುಗಳನ್ನು ವಿಡಿಯೋ ಮಾಡುತ್ತಾರೆ ಅವುಗಳನ್ನು ನಮ್ಮ ಫೇಸ್ಬುಕ್ ಪುಟದಲ್ಲಿ ಪ್ರಕಟವಾಗುತ್ತವೆ.

 

ಇಲ್ಲಿವರೆಗೆ ೨೦ಕ್ಕೂ ಹೆಚ್ಚು ವಿಡಿಯೋ ಸರಣಿಗಳು ಬಂದಿದ್ದು,ಬೇಂದ್ರೆ, ಕೆ,ಎಸ್.ನರಸಿಂಹಸ್ವಾಮಿ, ಕುವೆಂಪು ಹೀಗೆ ಹಲವು ಕವಿಗಳ ಕವಿತೆಗಳ ಸರಣಿ ಹೊರಬಂದಿದೆ.

ಕಹಳೆ ಕಾರ್ಯಾಗಾರ 

ನಾಟಕ ರಚನೆ ಮತ್ತು ಇತರ ಸಾಹಿತ್ಯ ಪ್ರಕಾರಗಳ ಬರವಣಿಗೆಯ ಸೂಕ್ಷ್ಮಗಳನ್ನು

 ಹಿರಿಯ ಸಾಹಿತಿಗಳಿಂದ ತಿಳಿಸುವ ಹೆಬ್ಬಯಕೆ

ಕನ್ನಡದ ಯುವ ಬರಹಗಾರರಿಗೆ ನಾಟಕ ರಚನೆ ಮತ್ತು ಇತರ ಸಾಹಿತ್ಯ ಪ್ರಕಾರಗಳ ಬರವಣಿಗೆಯ ಸೂಕ್ಷ್ಮಗಳನ್ನು ಹಿರಿಯ ಸಾಹಿತಿಗಳಿಂದ ತಿಳಿಸುವ ಹೆಬ್ಬಯಕೆಯಿಂದ "ಕಹಳೆ ಕಾರ್ಯಾಗಾರ" ಎಂಬ ಶೀರ್ಷಿಕೆಯಡಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿತ್ತು.

ನಮ್ಮ ಮೊದಲ ಕಾರ್ಯಾಗಾರವನ್ನು 
WeMove Theatre ನ ಸಂಸ್ಥಾಪಕರಾದ ಅಭಿಷೇಕ್ ಐಯ್ಯಂಗಾರ್  ಅವರು ನಡೆಸಿಕೊಟ್ಟರು