© ಕಹಳೆ

ನಮಸ್ಕಾರ ಎಲ್ಲರಿಗೂ,

ಕಹಳೆ ಪ್ರಸ್ತುತ 'ಕಹಳೆ ಕಥಾ ಪ್ರಶಸ್ತಿ -೨೦೧೯' ಸ್ಪರ್ಧೆಗೆ ಅದ್ಭುತವಾದ ಬೆಂಬಲ ಸಿಕ್ಕಿರೋದು ನಮಗೆ ಖುಷಿ ತಂದಿದೆ. ಸುಮಾರು ೧೪೦ಕ್ಕೂ ಹೆಚ್ಚು ಕಥೆಗಳು ಈ ಸ್ಪರ್ಧೆಗೆ ಬಂದಿದ್ದು ಕರ್ನಾಟಕದ ಎಲ್ಲ ಭಾಗಗಳಿಂದ ಕಥೆಗಾರರು ಪಾಲ್ಗೊಂಡಿದ್ದು ನಮಗೆ ತುಂಬಾ ಖುಷಿ ತಂದಿದೆ.

ನಾಡಿನ ಖ್ಯಾತ ಬರಹಗಾರರು, ಪ್ರಕಾಶಕ 'ವಿಕ್ರಂ ಹತ್ವಾರ್' ಅವರು ಕಥೆಗಳನ್ನು ಆಯ್ಕೆ ಮಾಡಿರುತ್ತಾರೆ. ಅವರಿಗೆ ನಾವು ಯಾವಾಗಲು ಆಭಾರಿ.

ಈ ಬಾರಿಯ 'ಕಹಳೆ ಕಥಾ ಪ್ರಶಸ್ತಿ -೨೦೧೯' ವಿಜೇತರು ಮೈಸೂರಿನ " ವಿಘ್ನೇಶ್ ಹಂಪಾಪುರ".
ದ್ವಿತೀಯ ಬಹುಮಾನ  'ಸಂಪತ್ ಸಿರಿಮನೆ' ಅವರಿಗೆ ಲಭಿಸಿದೆ. ಅವರಿಗೆ ಹೃತ್ಪೂರ್ವಕ 
ಅಭಿನಂದನೆಗಳು. ಆಯ್ಕೆಯಾದ ಎಲ್ಲ ಮೊದಲ ೨೦ ಕಥೆಗಾರರಿಗೆ ಹಾರ್ದಿಕ ಶುಭಾಶಯಗಳು.

ಮೊದಲೇ ತಿಳಿಸಿದಂತೆ, 
ಮೊದಲನೇ ಬಹುಮಾನಕ್ಕೆ 'ಕಹಳೆ ಕಥಾ ಪ್ರಶಸ್ತಿ' ಫಲಕ, ಪ್ರಶಸ್ತಿ ಪತ್ರ, ಪುಸ್ತಕಗಳನ್ನು ಕೊಟ್ಟು ಗೌರವಿಸಲಾಗುವುದು.
ಎರಡನೇ ಬಹುಮಾನಕ್ಕೆ ಪ್ರಶಸ್ತಿ ಪತ್ರ ಜೊತೆಗೆ ಪುಸ್ತಕಗಳನ್ನು ನೀಡಿ ಗೌರವಿಸಲಾಗುವುದು
ಮೊದಲ ೨೦ ಕಥೆಗಾರರೆಲ್ಲರಿಗೂ ಪ್ರಶಸ್ತಿ ಪತ್ರ  ನೀಡಿ ಗೌರವಿಸಲಾಗುವುದು

ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಇದೇ ತಿಂಗಳು ರಂದು  ಎಂ ಜಿ ರೋಡ್ ಮೆಟ್ರೋ ,ರಂಗಸ್ಥಳ ದಲ್ಲಿ ನಡೆಯಲಿದ್ದು. ಎಲ್ಲರೂ ಈ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.
ಈ ಕಾರ್ಯಕ್ರಮದ ಹೆಚ್ಚಿನ ವಿವರಗಳನ್ನು ಸಧ್ಯದಲ್ಲಿಯೇ ತಿಳಿಸುತ್ತೇವೆ 

ಆಯ್ಕೆ ಪ್ರಕ್ರಿಯೆದಲ್ಲಿ ತುಂಬಾ ವಿಳಂಬವಾಗಿದ್ದಕ್ಕೆ ನಿಮ್ಮಲ್ಲಿ ಕ್ಷಮೆ ಕೋರುತ್ತೇವೆ.
ವಿಳಂಬವಾಗಿದ್ದರೂ ಎಲ್ಲರೂ ಅದಕ್ಕೆ ಸಹಕರಿಸಿದ್ದೀರಿ. ನಿಮಗೆ ನಮ್ಮ ಕೃತಜ್ಞತೆ.

ನಿಮ್ಮ ಬೆಂಬಲವೇ ನಮಗೆ ಸ್ಫೂರ್ತಿ. ನಿಮ್ಮ ಹಾರೈಕೆ ಸದಾ ಹೀಗೆ ಇರಲಿ 
ವಿಜೇತರು 

ಇಂತಿ ನಿಮ್ಮ 
ಕಹಳೆ ತಂಡ